

7th January 2026

ಬೈಲಹೊಂಗಲ: ನೇಗಿನಹಾಳ ಗ್ರಾಮದಲ್ಲಿ ಎಲ್ಲಿ ನೋಡಿದರೂ ಹಳದಿ- ಕೆಂಪು ಬಾವುಟಗಳ ಹಬ್ಬ, ಬೀದಿ ಬೀದಿಗಳಲ್ಲೂ, ಮನೆಗಳ ಮೇಲ್ಪಾವಣಿಗಳಲ್ಲೂ ಕನ್ನಡದ ಘನತೆ ಹೊಳೆಯುತ್ತಿತ್ತು. ಇಡೀ ಊರೇ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದ ದೃಶ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡಿತು.
ಬೈಲಹೊಂಗಲ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಮಂಗಳವಾರ ಕಂಡುಬಂದ ದೃಷ್ಯಗಳಿವು.
ವಿವಿಧೆಡೆಯಿಂದ ಆಗಮಿಸಿದ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಮತ್ತು ಹಿರಿಯರು ಸಮ್ಮೇಳನಕ್ಕೆ ಸಾಕ್ಷಿಯಾಗಿ, ಕನ್ನಡ ಭಾಷೆ- ಸಂಸ್ಕೃತಿಯ ಮೇಲಿನ ಪ್ರೀತಿಯನ್ನು ಅಭಿವ್ಯಕ್ತಪಡಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯ ಆವರಣದಲ್ಲಿ ನಡೆದ ಸಮ್ಮೇಳನವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಉದ್ಘಾಟಿಸಿ ಮಾತನಾಡಿ,
"ಕನ್ನಡ ನಮ್ಮ ಬದುಕಿನ ಉಸಿರು. ಎಲ್ಲರೂ ಕನ್ನಡವನ್ನು ಕೇವಲ ಮಾತನಾಡುವಷ್ಟರಲ್ಲಿ ಸೀಮಿತಗೊಳಿಸದೆ, ಬದುಕಿನಲ್ಲಿ ಬೆಳೆಸಬೇಕು. ಕನ್ನಡ ನಮ್ಮ
ಅಸ್ತಿತ್ವದ ಗುರುತು" ಎಂದರು.
ಸಮ್ಮೇಳನದ ಅಧ್ಯಕ್ಷ ಪ್ರೊ. ಕೆ.ಎಸ್. ಕೌಜಲಗಿ ಅವರು ಮಾತನಾಡಿ
ಬೈಲಹೊಂಗಲ ನಾಡು ಸ್ವಾತಂತ್ರ್ಯ ಹೋರಾಟಗಾರರ ನಾಡು, ಮೊದಲು ಸಂಪಗಾಂವ ಇದ್ದ ತಾಲೂಕು ನಂತರ ಬೈಲಹೊಂಗಲ ತಾಲೂಕು ಆಯಿತು, ನಂದರು, ಮೌರ್ಯರು, ಶತವಾಹನರು, ಚಾಲುಕ್ಯರು, ರಾಷ್ಟ್ರಕೂಟರು,ಬ್ರಿಟಿಷರ ದಾಳಿಗೆ ತುತ್ತಾದರೂ ಬೈಲಹೊಂಗಲ ನಾಡು, ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ ಇನ್ನೂ ಅನೇಕರ ಸ್ವಾತಂತ್ರ್ಯ ಹೋರಾಟದ ನಾಡು, ನಾಗನೂರ ರುದ್ರಾಕ್ಷಿ ಮಠ, ಬೈಲಹೊಂಗಲ ಮುರುಸಾವಿರ ಮಠ ನೇಸರಗಿ ಮಲ್ಲಾಪುರ ಗಾಳೇಶ್ವರ ಮಠ ಸೇರಿದಂತೆ ಅನೇಕ ಮಠಗಳ ಬಿಡಾಗಿದ್ದು, ಪ್ರಾಚೀನ ಬೈಲಹೊಂಗಲದ ಕರಿಗುಡಿ, ನೇಸರಗಿ ಜೋಡಗುಡಿ, ವೀರಭದ್ರಶ್ವರ ದೇವಸ್ಥಾನ, ವಕ್ಕುಂದ ತ್ರಿಕೋಟೇಶ್ವರ ದೇವಸ್ಥಾನ ಹೆಸರುವಾಸಿ ಆಗಿವೆ. ಎಲ್ಲ ವಿಭಾಗ್ಯದಲ್ಲಿ ಬೈಲಹೊಂಗಲ ತಾಲೂಕು ಎಲ್ಲ ವಿಭಾಗಳಲ್ಲಿ ಮುಂದಿದ್ದು, ಬೆಳಗಾವಿ ಜಿಲ್ಲಾ ವಿಭಜನೆ ಆದರೆ ಬೈಲಹೊಂಗಲಕ್ಕೆ ಜಿಲ್ಲಾ ಸ್ಥಾನಮಾನ ಸಿಗಬೇಕು , ಕೃಷಿ ಅವಲಂಬಿತ ಈ ಭಾಗದ ರೈತರಿಗೆ ಉತ್ತೇಜನ ಸಿಗಲಿ,ಅದಕ್ಕಾಗಿಯೇ ಇದು ಗಂಡು ಮೆಟ್ಟಿನ ನಾಡು, ಕನ್ನಡ ಸರ್ಕಾರಿ ಶಾಲೆಗಳಿಗೆ ಉತ್ತೇಜನ ನೀಡಲಿ, ಪಾಲಕರು ಮಕ್ಕಳ ಶಿಕ್ಷಣ ಕನ್ನಡದಲ್ಲಿ ನೀಡಲು ಮುಂದೆ ಬರಲಿ ಎಂದರು.
ಸ್ವಾಗತ ಸಮಿತಿಯ ಸಾನಿಧ್ಯ ವಹಿಸಿದ್ದ
ನಿಜಗುಣಾನಂದ ಬೈಲೂರು ನಿಷ್ಕಲ ಮಂಟಪದ ಮಹಾಸ್ವಾಮೀಜಿ ಆಶೀರ್ವಚನ ನೀಡಿ,ಕನ್ನಡವನ್ನು ತಾಯಿಯಾಗಿ ಸ್ವೀಕರಿಸಿ, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು" ಎಂದರು.
ಮೂರು ಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ನೇಗಿನಹಾಳ ಮತ್ತು ಅದೈತಾನಂದ ಸ್ವಾಮೀಜಿ ಮಾತನಾಡಿ, "ಕನ್ನಡ ಉಳಿಸೋಣ ಎನ್ನುತ್ತೇವೆ. ಆದರೆ ಅದನ್ನು ಹೇಗೆ ಉಳಿಸಬೇಕು ಎಂಬುದರ ಬಗ್ಗೆ ಪ್ರಾಮಾಣಿಕ ಪ್ರಯತ್ನ ಬೇಕು. ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುವ ಮನಸ್ಥಿತಿ ಬೆಳೆಸಬೇಕು" ಎಂದರು.
ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, "ಯುವ ಬರಹಗಾರರು ಮತ್ತು ಕವಿಗಳು ಬೆಳೆಯಬೇಕು. ಇಂತಹ ಸಮ್ಮೇಳನಗಳು ಯುವ ಪೀಳಿಗೆಗೆ ಪ್ರೇರಣೆಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಕಾಶೀನಾಥ ಇನಾಮದಾರ, ಡಾ. ಶಾಂತಿನಾಥ ದಿಬ್ಬದ, ತಹಶೀಲ್ದಾರ ಹಣಮಂತ ಶಿರಹಟ್ಟಿ, ದೂರದರ್ಶನ ಕಲಾವಿದ ಸಿ ಕೆ ಮೆಕ್ಕೇದ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹಾಂತೇಶ ತುರಮರಿ, ಮಾಜಿ ಕಸಾಪ ಅಧ್ಯಕ್ಷ ಮೋಹನ ಪಾಟೀಲ, ಎಸ್. ಡಿ.ಗಂಗಣ್ಣವರ, ಮಹರುದ್ರಪ್ಪ ನಂದೇನ್ನವರ, ಗ್ರಾ ಪಂ ಅಧ್ಯಕ್ಷೆ ಮಹಾದೇವಿ ಕೋಟಗಿ, ಮಡಿವಾಳಪ್ಪ ಕುಲ್ಲೊಳ್ಳಿ,ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಎಸ್. ಸಿದ್ದಣ್ಣವರ, ಬೈಲಹೊಂಗಲ ತಾಲೂಕ ಕಸಾಪ ಅಧ್ಯಕ್ಷ ಎನ್ ಆರ್ ಠಕ್ಕಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವೈ.ತುಬಾಕಿ, ಉಪಾಧ್ಯಕ್ಷ ದೀಪಾ ಬೈಲವಾಡ, ಸಂತೋಷ ಹಡಪದ, ಶಿಕ್ಷಕ ಸಂತೋಷ ಪಾಟೀಲ, ಕಸಾಪ ಕಾರ್ಯದರ್ಶಿ ಮಂಜುಳಾ ಶೆಟ್ಡರ, ಶಿಕ್ಷಕ ಶಿವಬಸ್ಸು ಮೆಳವಂಕಿ, ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು,ಪದಾಧಿಕಾರಿಗಳು, ನೇಗಿನಹಾಳ ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು, ಬೈಲಹೊಂಗಲ ತಾಲೂಕಾ ಶಿಕ್ಷಕರು, ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದರು
ಬೆಳಿಗ್ಗೆ ರಾಷ್ಟ್ರಧ್ವಜ, ಪರಿಷತ್ತಿನ ಧ್ವಜ, ನಾಡಧ್ವಜಾರೋಹಣ ಗೈಯಲಾಯಿತು. ಸಮ್ಮೇಳನದ ಅಧ್ಯಕ್ಷ ಪ್ರೋ ಕೆ.ಎಸ್. ಕೌಜಲಗಿ ದಂಪತಿಗಳನ್ನು ಬೆಳ್ಳಿ ಸಾರೋಟಿಯಲ್ಲಿ ಕುಂಭಮೇಳದ ಸುಮಂಗಲೆಯರು, ಸೈಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ವಿವಿಧ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಕಲಾ ಮೆರವಣಿಗೆಯ ಮೂಲಕ ಅದ್ದೂರಿಯಾಗಿ ಮುಖ್ಯ ವೇದಿಕೆಗೆ ಕರೆತರಲಾಯಿತು. ಮೆರವಣಿಗೆ ಗ್ರಾಮದಲ್ಲಿ ಕನ್ನಡತನದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.
ಸ್ವಾಗತ ಸಮಿತಿ ಅಧ್ಯಕ್ಷೆ ರೋಹಿಣಿ ಬಾಬಾಸಾಹೇಬ ಪಾಟೀಲ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕಸಾಪ ತಾಲೂಕ ಅಧ್ಯಕ್ಷ ಎನ್. ಆರ್. ಠಕ್ಕಾಯಿ ಸ್ವಾಗತಿಸಿ, ರಾಜು ಹಕ್ಕಿ ಕಾರ್ಯಕ್ರಮ ನಿರೂಪಿಸಿದರು. ಸೌಟ್ಸ್ ಮತ್ತು ಗೈಡ್ನ ವಿದ್ಯಾರ್ಥಿಗಳ ಪೆರೆಡ್ ನೋಡುಗರ ಗಮನ ಸೆಳೆಯಿತು.
*****ವರದಿ: ಸುದ್ದಿ ಸದ್ದು ಪತ್ರಿಕೆ****"
undefined

ವೀರಶೈವ ಲಿಂಗಾಯತ ಸಮಾಜದ ಶ್ರೀಮತಿ ಗಿರಿಜಮ್ಮ ಅಕ್ಕಿ (50) ರಸ್ತೆ ಅಪಘಾತದಲ್ಲಿ ನಿಧನ
-1768489815566.jpg)
ಸಂಕ್ರಾ0ತಿಯ0ದು ಹಾಡುಹಗಲೇ ಯುವತಿಯ ಬರ್ಬರ ಹತ್ಯೆ ಮದುವೆಯಾಗಲೊಪ್ಪದ ಪ್ರಿಯತಮೆಯ ಕತ್ತುಸೀಳಿದ ಪ್ರಿಯಕರ

ಬಳ್ಳಾರಿಯಲ್ಲಿ ಕಳಪೆ ರಸ್ತೆ ಕಾಮಗಾರಿಕೆ ಆರೋಪ : ಬಾಪೂಜಿ ನಗರ–ಆಂದ್ರಾಳ್ ಬ್ರಿಡ್ಜ್ ರಸ್ತೆಗೆ ಸಾರ್ವಜನಿಕರ ತೀವ್ರ ವಿರೋಧ